ನಮ್ಮೂರು

ಬೀದರ ಜಿಲ್ಲೆಯ ಔರಾದ ತಾಲೂಕು ಕೇಂದ್ರದಿಂದ 8 ಕಿ.ಮೀ ಅಂತರದಲ್ಲಿರುವುದೇ ಯನಗುಂದಾ ಗ್ರಾಮ. ಯನಗುಂದಾ ಗ್ರಾಮವು ಸುತ್ತಮುತ್ತಲಿನ ಗ್ರಾಮಗಳಿಗೆ ಯನಗುಂದಿ ಬಸವಣ್ಣ ಎಂದೇ ಪರಿಚಿತ. ಗ್ರಾಮದಲ್ಲಿ ತುಂಬಾ ಹಳೆಯದಾದ ನಂದಿ ಬಸವಣ್ಣ ದೇವಸ್ಥಾನವಿದೆ. ಗ್ರಾಮದ ಹಿರಿಯರು ಪುರಾತನ ಕಥೆಯು ಸಹ ಹೇಳುತ್ತಾರೆ.
ಹತ್ತಿರದಲ್ಲಿ  ತೇಗಂಪೂರ ಗ್ರಾಮದ ಕೇರೆಯು ಯನಗುಂದಾದ ಜನರಿಗೆ ವರದಾನವಾಗಿದೆ ಎನ್ನಬಹುದು. ಗ್ರಾಮದ ಬಹುತೇಕ ಜನರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಅವರೇಲ್ಲರ ಕೃಷಿ ಭೂಮಿಗೆ ಈ ಕೇರೆ ನೀರು ಆಶ್ರವಾಗಿದೆ. ಗ್ರಾಮದಲ್ಲಿ ಎಲ್ಲ ರೀತಿಯ ಜಾತಿ, ಮತ,ಪಂಥ, ಧರ್ಮದ ಜನರು ವಾಸವಾಗಿದ್ದು, ಎಲ್ಲರೂ ಅನ್ಯೂನತೆಯಿಂದ ಕೂಡಿದೆ. ನಾನು ಕಳೆದ 15 ವರ್ಷದಿಂದ ಈ ಗ್ರಾಮದ ಸರಕಾರಿ ಪ್ರೌಢ ಶಾಲೆ ಯನಗುಂದಾದಲ್ಲಿ ದೈಹಿಕ ಶಿಕ್ಷಣ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದೇನೆ. ಹೀಗಾಗಿ ಗ್ರಾಮದ ಬಗ್ಗೆ ಆಳವಾದ ಜ್ಞಾನ ಮತ್ತು ಗ್ರಾಮಸ್ಥರೊಂದಿಗೆ ಹತ್ತಿರ ಒಡನಾಟವಿದೆ. ವಾಸ್ತವದಲ್ಲಿ ಅತ್ಯಂತ ಶಾಂತ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಸದಾ ಸಹಕರಿಸುವ ಗ್ರಾಮ.
ಗ್ರಾಮದ 

No comments:

Post a Comment